November 2022

ಸ್ವಯಂಚಾಲಿತ ಕಾರ್ ಗಳು

0
0

ರೊಬೊಟ್ ಗಳನ್ನು ಕನ್ನಡದಲ್ಲಿ ಯಂತ್ರಮಾನವ ಎಂದು ಕರೆಯಬಹುದುಸಿನೇಮಾ ಅಥವ ಟಿವಿ ಯಲ್ಲಿ ಒಂದು ದೈತ್ಯ ರೊಬೊಟ್ ಬಂದು ಎಲ್ಲವನ್ನೂ ನಾಶಮಾಡುವ ಭರದಲ್ಲಿ ಅಡ್ಡಾಡುವುದನ್ನು ನೀವು ನೋಡಿರಬಹುದುನಿಜಜೀವನದಲ್ಲಿ ರೊಬೊಟ್‍ಗಳು ಹಾಗೇನೂ ಮಾಡವುರೊಬೊಟ್‍ ಎಂದರೆ ಸ್ವಯಂಚಾಲನೆ ಮಾಡಬಲ್ಲ, ಕಂಪ್ಯೂಟರ್ ಗಳಂತೆ ಪ್ರೋಗ್ರಾಂ ಗಳ ಸಹಾಯದಿಂದ  ಹೇಳಿದ ಕೆಲಸಗಳನ್ನು ಚಾಚೂತಪ್ಪದೆ ನಿರಂತರವಾಗಿ ಮಾಡಬಲ್ಲ ಮಶೀನ್‍ಗಳು.

ಇವತ್ತಿನ ವಿಷಯ ಸ್ವಯಂಚಾಲಿತ ಕಾರ್ ಗಳು. ಇಂಗ್ಲಿಷ್ ನಲ್ಲಿ ಇವನ್ನು ಅಟೊನಮಸ್ ಕಾರ್ ಎಂದು ಕರೆಯುತ್ತಾರೆ, ನಾವು ಕನ್ನಡದಲ್ಲಿ  ಸ್ವಯಂಚಾಲಿತ ಅಥವಾ ಸ್ವಾಯತ್ತ ಕಾರ್ ಎಂದೂ ಕರೆಯಬಹುದುಇವು ಚಾಲಕನ ಸಹಾಯವೇ ಇಲ್ಲದೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತನ್ನಷ್ಟಕ್ಕೆ ತಾನು ಚಲಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುತ್ತವೆ.

 ಕಾರ್ ಗಳೂ ಒಂದು ರೀತಿಯ ರೊಬೊಟ್ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದುಆದರೆ ಅದು ನಿಜಇವೂ ಒಂದು ರೀತಿಯ, ಕಾರ್ ರೂಪದಲ್ಲಿನ, ರೊಬೊಟ್ ಗಳು.

ಈ ಕಾರ್ ಗಳಲ್ಲಿ ಅನೇಕ ರೀತಿಯ ಸೆನ್ಸಾರ್ ಗಳನ್ನು ಜೋಡಿಸಿರುತ್ತಾರೆಈ ಸೆನ್ಸಾರ್ ಗಳ ಸಹಾಯದಿಂದ ಅವು ಸ್ವಯಂಚಾಲನೆ ಮಾಡುತ್ತವೆಸೆನ್ಸಾರ್ ಗಳು ಬೇರೆ ಬೇರೆ ರೀತಿಯವುರಸ್ತೆಯ ಅಡೆತಡೆಗಳನ್ನು ಗ್ರಹಿಸಿ ಸ್ಪಂದಿಸುವ ಸೆನ್ಸಾರ್ ಗಳು, ದೂರ ಮತ್ತು ದಿಕ್ಕು ಗ್ರಹಿಸುವ   navigation GPS ಸೆನ್ಸಾರ್ ಗಳು, ಸಂಚಾರ ದೀಪ, ಸಂಕೇತಗಳು, ಚಲನಾ ಫಲಕಗಳನ್ನು ಗ್ರಹಿಸುವ ಸೆನ್ಸಾರ್, ನಿರ್ದಿಷ್ಟ ವೇಗದಲ್ಲೇ ಹೋಗಲು ಅನುವಾಗುವ ಸೆನ್ಸಾರ್, ಇತ್ಯಾದಿ.    ಸೆನ್ಸಾರ್ ಗಳನ್ನು ನಿಯಂತ್ರಿಸಲು ಒಂದಕ್ಕಿಂತ ಹೆಚ್ಚು ಕಂ‍ಪ್ಯೂಟರ್ ಗಳನ್ನು ಈ ಕಾರ್ ಗಳಲ್ಲಿ ಹೊಂದಿಸಿರುತ್ತಾರೆ.

ಸ್ವಯಂಚಾಲಿತ ಕಾರ್ ಗಳ ಕೆಲವು ಉಪಯೋಗಗಳನ್ನುನೋಡೋಣವೃದ್ಧರು ಮತ್ತು ದಿವ್ಯಾಂಗ ಜನರಿಗೆ ಈ ವಾಹನಗಳು ಬಹಳ ಸಹಾಯವಾಗುತ್ತವೆಅನೇಕ ಸಂಧರ್ಭಗಳಲ್ಲಿ ಶಾಲಾ ಮಕ್ಕಳಿಗೂ ಉಪಯೋಗಕ್ಕೆ ಬರುತ್ತವೆಮನುಷ್ಯ ಚಾಲಕರ ಆಯಾಸ, ತೂಕಡಿಕೆ ಅಥವಾ ನಿರ್ಲಕ್ಷ್ಯತನದಿಂದ ಆಗಬಹುದಾದ ಅಪಘಾತಗಳನ್ನು ಈ ಕಾರ್ ಗಳ ಬಳಕೆಯಿಂದ ತಡೆಗಟ್ಟಬಹುದುಸೆನ್ಸಾರ್ ಗಳು ಯಾಂತ್ರಿಕವಾಗಿ ಕೆಲಸ ಮಾಡುವುದರಿಂದ ಉದ್ವೇಗ ಅಥವಾ ಕೋಪದಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಬಹುದು.

ಈ ಕಾರ್ ಗಳು ಹೆಚ್ಚು ಪ್ರಚಲಿತವಾಗಿ ರೂಢಿಗೆ ಬರಬೇಕಾದರೆ ತಂತ್ರಜ್ಞಾನ ಇನ್ನೂ ಬಹಳ ಮುನ್ನಡೆ ಸಾಧಿಸಬೇಕಾಗಿದೆ.   ಇದರ ಜೊತೆಗೆ ನಗರಗಳ ಒಳಗೆ  ನಮಗೆಲ್ಲ ಚಿರಪರಿಚಿತವಾಗಿರುವ ಅಸ್ತವ್ಯಸ್ತ ಟ್ರಾಫಿಕ್ ಮಧ್ಯೆ ವಾಹನ ಚಲಿಸುವುದು ಸುಲಭದ ಮಾತಲ್ಲಹಾಗಾಗಿ ರಸ್ತೆ ಮತ್ತು ರಸ್ತೆ ಬದಿಯ ಮೂಲಸೌಕರ್ಯದ ಬೃಹತ್ ನವೀಕರಣ ಅತ್ಯಗತ್ಯವಿದೇಶದ ಕೆಲವು ಜಾಗಗಳಲ್ಲಿ ಪ್ರಾಯೋಗಿಕವಾಗಿ ಈ ಸ್ವಯಂ ಚಾಲಿತ ವಾಹನಗಳನ್ನು ಸಂಶೋಧಕರು ಬಿಟ್ಟಿದ್ದಾರೆನಮ್ಮ ದೇಶದಲ್ಲಿ ಇವು ರಸ್ತೆ ಕಾಣುವುದು ಕಷ್ಟವಾದರೂ, ಇದರ ಜೊತೆಗಿನ ಆವಿಷ್ಕಾರಗಳಿಂದ ಅನೇಕ ಉಪಯೋಗಗಳನ್ನು ನಾವು ಖಂಡಿತವಾಗಿ ಪಡೆಯಬಹುದು

ಲೇಖಕರ ಬಗ್ಗೆ :

ಶ್ಯಾಮ್ ಮೂರ್ತಿ, IIITBಯಲ್ಲಿ PhD ವಿದ್ಯಾರ್ಥಿಯಾಗಿ, ಪ್ರೊ. ಶ್ರೀನಿವಾಸ್ ವಿವೇಕ್ ಅವರ ಮಾರ್ಗದರ್ಶನದಲ್ಲಿ 2018 ರಿಂದ ಅಧ್ಯಯನ ಮಾಡುತ್ತಿದ್ದಾರೆ. ಇವರ PhD ವಿಷಯ cryptography. ಇದಕ್ಕೆ ಮುಂಚೆ ಸುಮಾರು 20 ವರ್ಷಗಳ ಕಾಲ ಇವರು IT ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಕರ್ನಾಟಕ ಸಂಗೀತ ಕೇಳುವ ಹವ್ಯಾಸವಿದೆ.