November 2022

ಸುಸ್ಥಿರ ಬೆಳವಣಿಗೆಗೆ ಕೃತಕ ಬುದ್ಧಿಮತಿಕೆ

0
0

ಪ್ರಸ್ತುತ ವಿಶ್ವದಲ್ಲಿಸುಸ್ಥಿರ ಬೆಳವಣಿಗೆಅಥವ “Sustainable development” ಎಂಬ ಪರಿಕಲ್ಪನೆ, ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯು, ನಾವು ಅವಲಂಬಿಸಿರುವ ನೈಸರ್ಗಿಕ ಮತ್ತು ಸಾಮಾಜಿಕ ಸಂಪನ್ಮೂಲಗಳನ್ನು ಸಂರಕ್ಷಿಸಿಯೇ ಬೆಳೆಯುವಂತಹ ಪ್ರಣಾಲಿಗೆ ಸುಸ್ಥಿರ ಬೆಳವಣಿಗೆ ಎಂದು ಕರೆಯುತ್ತೇವೆ.

ಸುಸ್ಥಿರತೆ ಎಂಬುದು ಭಾರತೀಯರಿಗೆ ಹೊಸ ವಿಷಯವೇನಲ್ಲ. ಶತಮಾನಗಳಿಂದ, ನಮ್ಮ ನಾಗರಿಕತೆಯುಧರ್ಮಎಂಬ ಪ್ರಮುಖ ನೆಲೆಗಟ್ಟಿನ ಮೇಲೆ ನಿರ್ಮಿಸಲ್ಪಟ್ಟಿದೆ. ಧರ್ಮ ಎಂಬ ಪದದ ಮೂಲಧೃತ್”– ಇದರ ಅರ್ಥ ಸ್ಥಿರತೆ ಮತ್ತು ನಿರಂತರತೆ.

ಆದರೆ, ಹೆಚ್ಚುತ್ತಿರುವ ಇಂದಿನ ಕೈಗಾರಿಕೀಕರಣ ಮತ್ತು ಬಳಕೆಆಧಾರಿತ ಆರ್ಥಿಕತೆ, ನಮ್ಮ ನೈಸರ್ಗಿಕ ಮತ್ತು ಸಾಮಾಜಿಕ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತಿವೆ. ಆರ್ಥಿಕ  ಪ್ರಗತಿ ದೇಶದ ಹಿತಕ್ಕೆ ಅತಿ ಪ್ರಾಮುಖ್ಯವಾದುದ್ದು ಹಾಗೂ ಕೈಗಾರೀಕರಣ ಆರ್ಥಿಕ ಸಮೃದ್ಧಿಯ ಒಂದು ಅವಿಭಾಜ್ಯ ಅಂಗಸುಸ್ಥಿರ ರೀತಿಯಲ್ಲಿ ಕೈಗಾರಿಕೀಕರಣ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವುದು ಪ್ರಸ್ತುತದಲ್ಲಿ ಒಂದು ದೊಡ್ಡ ಸವಾಲೇ ಸರಿ.

ಸುಸ್ಥಿರ ಕೈಗಾರಿಕೀಕರಣ ಒಂದು ಬಹಳ ಸಂಕೀರ್ಣವಾದ ಸಮಸ್ಯೆ, ಇದರ ಪರಿಹಾರಕ್ಕಾಗಿ ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನಅದರಲ್ಲೂ ಪ್ರಮುಖವಾಗಿ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚುತಿದೆ. ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮವು  (UNDP) ಸುಸ್ಥಿರ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆಯ ಸಂಶೋಧನೆಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದೆ.

ಸುಸ್ಥಿರ ಬೆಳವಣಿಗೆಗಾಗಿ ಬಳಸುವ ಒಂದು ಪ್ರಮುಖ ರೀತಿಯೇನೆಂದರೆನೀತಿ ಮಧ್ಯಸ್ಥಿಕೆ” (policy intervention). ಈಗಾಗಲೇ ವಿಶ್ವದಾದ್ಯಂತ ಬಹಳಷ್ಟು ನೀತಿ ಮಧ್ಯಸ್ತಿಕೆಗಳು ಸಕ್ರಿಯವಾಗಿವೆ.

ಸುಸ್ಥಿರತೆಗಾಗಿ ನೀತಿ ಮಧ್ಯಸ್ತಿಕೆಗಳನ್ನು ವಿನ್ಯಾಸಗೊಳಿಸುವುದು ಬಹಳ ಸಂಕೀರ್ಣವಾದ ಕೆಲಸ. ಒಂದು ಅಂಶವನ್ನು  ಸುಸ್ಥಿರಗೊಳಿಸುವ ನೀತಿ ಮಧ್ಯಸ್ತಿಕೆಗಳು ತಾವೇ ಇನ್ನೊಂದು ಅಂಶವನ್ನು ಅಸ್ಥಿರಗೊಳಿಸಬಹುದು, ಹಾಗೆಯೇ ಒಂದು ಮಟ್ಟದಲ್ಲಿ ಸುಸ್ಥಿರಗೊಳಿಸುವಂಥ ಮಧ್ಯಸ್ತಿಕೆಗಳು ಇನ್ನೊಂದು ಮಟ್ಟದಲ್ಲಿ ಪ್ರಣಾಲಿಯನ್ನು ಅಸ್ಥಿರಗೊಳಿಸಬಹುದು, ಉದಾಹರಣೆಗೆ, ಬಹಳ ಶ್ರಮಪಟ್ಟು ಅಳವಡಿಸಲಾದ ನೀತಿ ಮಧ್ಯಸ್ತಿಕೆಗಳು ಜನರ ಆರೋಗ್ಯವನ್ನು ಸುಸ್ಥಿರಗೊಳಿಸಿ, ಮರಣಮಟ್ಟವನ್ನು ಕಡಿಮೆ ಮಾಡಿತೆಂದು ಭಾವಿಸೋಣ, ಇದರ ಪರಿಣಾಮ ಆಹಾರ ಮತ್ತು ಇನ್ನಿತರೇ ಸಂಪನ್ಮೂಲಗಳ  ಬೇಡಿಕೆ ಹೆಚ್ಚಾಗಿ, ಅಂಶವು ಸಮಾಜವನ್ನು ಅಸ್ಥಿರಗೊಳ್ಳಬಹುದು! ಹಾಗಂತ ಜನರ ಅರೋಗ್ಯ ಗುಣಮಟ್ಟವನ್ನು ಸುಧಾರಿಸಬಹುದಾದಂತಹ ನೀತಿ ಮಧ್ಯಸ್ತಿಕೆಯನ್ನು ಅಳವಡಿಸದೇ ಇರುವುದು ಸಹ ಒಳ್ಳೆಯದಲ್ಲ.

ಹಾಗಾಗಿ, ಸುಸ್ಥಿರ ಅಭಿವೃದ್ಧಿಗಾಗಿ, ನೀತಿ ಮಧ್ಯಸ್ಥಿಕೆಗಳು  ಯಾವುದೇ ಒಂದು ಅಂಶದಮೇಲೆ ಕೇಂದ್ರೀಕೃತಗೊಂಡು ಮತ್ತೆಲ್ಲಾ ಅಂಶಗಳನ್ನು ಹೊರತುಪಡಿಸುವಂತಿರಬಾರದು ಸಮಗ್ರವಾದಂತ ರೀತಿಯಲ್ಲಿ ವಿನ್ಯಾಸಗೊಳಿಸ ಬೇಕಾಗುತ್ತದೆ.

ಇಂತಹ ಸಂಕೀರ್ಣವಾದಂತಹ  ಕಾರ್ಯಕ್ಕೆ ಬೆಂಬಲ ನೀಡಲು, Policy Support System (PSS) ಎಂಬ ಕೃತಕ ಬುದ್ಧಿಮತ್ತೆಯ ಮೇಲೆ ಆಧರಿಸಿದಂತಹ ತಂತ್ರಾಂಶಗಳು ಹೆಚ್ಚು ಪ್ರಚಲಿತವಾಗುತ್ತಿವೆ. ವಿಶ್ವದಾದ್ಯಂತ ದಿಕ್ಕಿನಲ್ಲಿ ಬಹಳಷ್ಟು ಸಂಶೋಧನಾ ಕಾರ್ಯಗಳು ಪ್ರಗತಿಯಲ್ಲಿದ್ದು, ಒಂದಷ್ಟು (proprietary) ಏಕಸ್ವಾಮ್ಯದ ವಾಣಿಜ್ಯ ಉತ್ಪನ್ನಗಳೂ  ಸಹ ಹೊರಬರಲು ಪ್ರಾರಂಭವಾಗಿವೆ.

ಭಾರತದಲ್ಲೂ ಸಹ, ದಿಕ್ಕಿನಲ್ಲಿ ವಿವಿಧ ಹಂತಗಳಲ್ಲಿ ಕಾರ್ಯಗಳು ಪ್ರಗತಿಯಲ್ಲಿವೆ. ರಾಷ್ಟ್ರಮಟ್ಟದಲ್ಲಿ, ಹಾಗೂ ಹಲವಾರು ರಾಜ್ಯಮಟ್ಟದಲ್ಲಿಮುಕ್ತ ದತ್ತಾಂಶ ಪ್ರಕ್ರಿಯೆಗಳು” (open data initiatives) ಬಹಳಷ್ಟು ವರ್ಷಗಳಿಂದ ನಡೆಯುತ್ತಾ ಬಂದಿವೆ. ಯಾವುದೇ ಕೃತಕ ಬುದ್ಧಿಮತ್ತೆಗೆ ಉನ್ನತ ಮಟ್ಟದ ದತ್ತಾಂಶಗಳು ಅತ್ಯಗತ್ಯ. ಹಾಗಾಗಿ  ಒಂದಷ್ಟು ಮುಕ್ತ ದತ್ತಾಂಶ  ವೇದಿಕೆಗಳೂ ಸಹ ಪ್ರಾರಂಭವಾಗಿವೆ.

ಇವೆಲ್ಲವೂ, ಮುಂಬರುವ ದಿನಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ಭಾರತವು ಪರಿಣಾಮಕಾರಿಯಾದ ಹೆಜ್ಜೆಗಳನ್ನು ಇಡುವಲ್ಲಿ ಮಹತ್ವದ ಕಾರ್ಯಗಳನ್ನು ಕೈಗೊಳ್ಳಬಹುದೆಂಬ ಭರವಸೆಯನ್ನು ಬಲಿಷ್ಠಗೊಳಿಸಿವೆ.

ಲೇಖಕರುಪ್ರೊಶ್ರೀನಾಥ್ ಶ್ರೀನಿವಾಸ, ಡೀನ್ (ಆರ್&ಡಿ) , IIIT Bangalore