ಯಾರಿಗೂ ಬೇಡವಾದವನು.!!
ಅವನ ಕಣ್ಣಲ್ಲಿ ಒಂದು ಹನಿಯು ಇಲ್ಲ
ಬೀಸಿಲ ಮರೆತು ಬೇವರ ಸುರಿಸಿ ದುಡಿಯುತ್ತಿದ್ದವ
ಕಣ್ಣೀರೆಲ್ಲ ಬೆವರ ಹನಿಗಾಗಿ ಸುರಿದಿರುವಾಗ
ಕಣ್ಣ ಹನಿಯಾದರು ಹೇಗೆ ಬಂದೀತು
ಕಲ್ಲು ಮನಸ್ಸು ಎಂದು ಹಿಯ್ಯಾಳಿಸಿದರು
ಎರಡು ಹೊತ್ತಿನ ಅನ್ನಕ್ಕಾಗಿ ಕಲ್ಲು ಓಡೆಯುತ್ತಿದ್ದವನ ಮನಸ್ಸು ಕಲ್ಲಾಯಿತೆ..?
ಗಾಯದ ಮೇಲೆ ಮಾತಿನ ಉಪ್ಪು ಸುರಿದರು
ಆದರು ಅವ ಕಣ್ಣೀರಾಕಲಿಲ್ಲ
ಸಂಸಾರದ ಹೊರೆಯನ್ನು ಹೊತ್ತವನಿಗೆ
ಸಾವಿನ ಮನೆಯ ಬಾರ ಹೊರೆಯಾಗಲ್ಲಿಲ್ಲ..!
ಎದೆಯಲ್ಲಿ ನೂರು ನೋವಿದೆ ಕೇಳುವವರಿಲ್ಲ
ತನಗೆಂದು ಏನನ್ನು ಕೂಡಿಡಲಿಲ್ಲ
ದುಡಿದದ್ದೇಲ್ಲವನ್ನು ತನ್ನವರಿಗಾಗಿ ಕೊಟ್ಟಿದ್ದಾಗಿದೆ
ಅವರ ಸಂತೋಷಕ್ಕಾಗಿ ನಗುವಿಗಾಗಿ..!
ಹೆತ್ತು ಸಾಕಿ ಸಲುಹಿದ ಮಕ್ಕಳು
ಅವಳಿಲ್ಲದ ಮೇಲೆ ಅನಾಥನನ್ನಾಗಿ ಮಾಡಿಬಿಟ್ಟರು
ಮನೆಯಿಂದ ಹೊರಗೆ ದೂಡಿದರು
ಆದರು ಶಪಿಸಲಿಲ್ಲ ಸುಖಿಯಾಗಿರಿ ಎಂದು ಅರಸಿದ
ಕಾಣದ ದಾರಿಗೆ ಕಿವಿಕೊಟ್ಟು ನಡೆದ
ಕಾಲುಗಳು ನಡುಗುತ್ತಲಿವೆ
ಕಣ್ಣುಗಳು ಮಸುಕಾಗಿವೆ
ಎತ್ತ ನಡೆಯುತ್ತಲಿರುವೆ ಎಂದು
ಅರಿವೆ ಇಲ್ಲದೆ ನಡೆಯುತ್ತ ಸಾಗಿದ
ಗಂಟಲು ಒಣಗುತ್ತಿತ್ತು
ಹೃದಯ ಜೋರಾಗಿ ಬಡಿಯುತಲಿತ್ತು
ಸಂಜೆಯ ಸೂರ್ಯ ಕರೆಯುತಲಿದ್ದ
ಅವನ ಕರೆಗೆ ಉಗುಟ್ಟವನಂತೆ
ಕುಸಿದು ಬಿದ್ದವನಿಗೆ ಆಕಾಶ ಕಾಣುತ್ತಿತ್ತು
ಮನಸ್ಸಿನ ಬಾರ ಇಳಿದಿತ್ತು ಉಸಿರು ನಿಂತಿತ್ತು.
~ ಸು.ಶಿ. ಸುರೇಶ್, Manager (Finance)