November 2022

A Penny for Your Thoughts

0
0

ನನ್ನ ಕೂಸು

ಬಣ್ಣಗಳ ಕನಸೊಂದು

ಕೈ ಸೇರಿತ್ತು, ಕಂಬನಿ ತುಂಬಿತ್ತು

ಚಿಗುರೊಡೆದು ಕೂಡಿತ್ತು

ನೂರಾರು ಭಾವನೆಗಳು

ಹೇಗೆ ಶುರು ಮಾಡಲಿ

ಅವಳ ಕಂಡ ಘಳಿಗೆ

ಕೇಳಿ ಅವಳೇ ಪುಟ್ಟ ಮಗುವು

ಹೃದಯದ ಉಯ್ಯಾಲೆ ಮೇಲೆ

ಅವಳಿದ್ದರೆ ಕನಸುಗಳ ಲಾಲಿಯು

ಕೈ ಹಿಡಿದು ನಡೆದ ಮೇಲೆ

ಕಂಬನಿಯು ಕರಗುವುದು

ಕಂಡಾಗ ಅವಳ ಮೊಗವು

ನಾನೊಂದು ಪುಟ್ಟ ಮಗುವು

ತುಂಟಾಟದಲಿ  ದಿನವೂ

ದಣಿದಾಗ ಉಪಚರಿಸುವಳು

ಮತ್ತೆ ನನ್ನ ಅಮ್ಮನಂತೆ

ನೋವೆಲ್ಲಾ ಮರೆಸುವಳು

ಧೈರ್ಯ ತುಂಬುವ ಸ್ನೇಹಿತೆಯಂತೆ

ಕೇಳಿ ಮಗಳಿರುವಳು ನನ್ನ ಜೊತೆ

ಹೇಳಿ ಇನ್ಯಾಕೆ ನನಗೆ ಕಷ್ಟಗಳ ಚಿಂತೆ

*ವಧುವಾದೆ ನಾನು*

ನೆನಪುಗಳು ಕರಗುತಿದೆ

ಹೊಸಿಲು ದಾಟಿ

ಹೊರಡುವ ಮೊದಲೇ,

ಒಳಗೊಳಗೆ ಕೊಲ್ಲುತ್ತಿದೆ

ಸಿಂಗಾರದ ನಗುವು

ವಿದಾಯದ ಅಂಚಿನಲ್ಲೇ.

ಹೊತ್ತಾಯಿತು ಬಿಳ್ಕೊಡಿಗೆ

ಹೆತ್ತವರ ಆಸೆಗೆ, ಕೀರ್ತಿಗೆ

ಕಾರಣವೊಂದೆ ವಧುವಾದೆ ಇಂದು

ತುಂಬಿತು ಸಂಭ್ರಮ ಮಂಟಪದಿ

ಎಲ್ಲರೊಳಗೆ ಹರುಷವು ಬಂದು

ಕೊರಳು ಒಡ್ಡಿ ಬಾಗಿದೆ

ಸಮಾಜಕ್ಕೋ? ಅವನಿಗೋ?

ಕಾಡುತಿದೆ ಪ್ರಶ್ನೆಯೂ ಹಾಗೆ ಸುಮ್ಮನೆ

-ಮಂಜುನಾಥ್, Accountant